4. ರಾಕೆಟ್ ಮತ್ತು ಕ್ಷಿಪಣಿಗಳಿಗಿರುವ ವ್ಯತ್ಯಾಸವೇನು?
ಪ್ರೊ. ಪಿ. ವೆಂಕಟರಾಮಯ್ಯ, ಅಧ್ಯಕ್ಷರು, ಶಾಲೆಗಳಲ್ಲಿ ವಿಜ್ಞಾನಾಭಿವೃದ್ಧಿ ಸಮಿತಿ, ಮೈಸೂರು ವಿಶ್ವವಿದ್ಯಾನಿಲಯ

ಕೇಳಿದವರು: ಶ್ರಿತಿ ಎಸ್. ಸರ್ಕಾರಿ ಪ್ರೌಢಶಾಲೆ ಹುಲ್ಲಹಳ್ಳಿ


ರಾಕೆಟ್ಟು ಮತ್ತು ಕ್ಷಿಪಣಿಗಳಿಗಿರುವ ವ್ಯತ್ಯಾಸ?:
    ರಾಕೆಟ್ಟು ಮತ್ತು ಕ್ಷಿಪಣಿಗಳು ರಚನೆಯಲ್ಲಿ ಒಂದೇ ರೀತಿ ಕಾಣುವುವು, ಆದರೆ ಅವುಗಳು ಮಾಡುವ ಕೆಲಸ ಮಾತ್ರ ಸಂಪೂರ್ಣವಾಗಿ ಬೇರೆ ಬೇರೆಯಾಗಿವೆ.  ಜೊತೆಗೆÀ ಉಪಯೋಗದಲ್ಲಿಯೂ ಅವುಗಳು ಬೇರೆಬೇರೆಯಾಗಿವೆ. 
     ರಾಕೆಟ್ಟುಗಳನ್ನು ಬಾಹ್ಯಾಕಾಶ ಶೋಧನೆಗೆ ಮತ್ತು ರಕ್ಷಣಾ ಅಂದರೆ ಮಿಲಿಟರಿ ಕಾರ್ಯಗಳಿಗೆ ಉಪಯೋಗಿಸಲಾಗುತ್ತದೆ.ರಾಕೆಟ್ಟುಗಳನ್ನು ಉಪಯೋಗಿಸಿ ಬಾಹ್ಯಾಕಾಶಕ್ಕೆ ಉಪಕರಣಗಳನ್ನು ಅಥವಾ ಮಾನವನನ್ನು ಸಾಗಿಸಬಹುದು.ಅವುಗಳಲ್ಲಿ ಅಳವಡಿಸುವ ಇಂಧನದಿಂದ ಅವುಗಳಿಗೆ ಹೆಚ್ಚಿನ ವೇಗ ದೊರಕಿಸಲಾಗುತ್ತದೆ.
    ಕ್ಷಿಪಣಿಗಳನ್ನು ಮಿಲಿಟರಿ ಉದ್ದಿಶ್ಯಗಳಿಗೆ ಮಾತ್ರ ಉಪಯೋಗಿಸಲಾಗುತ್ತದೆ. ರಾಕೆಟ್ಟುಗಳಂತೆ ಕ್ಷಿಪಣಿಗಳನ್ನು ಕೂಡ ಗುರುತ್ವ ಮತ್ತು ವಾತಾವರಣದ ಘರ್ಷಣೆಮೀರುವಂತೆ ಮಾಡಲು ಅವುಗಳು ಹೆಚ್ಚಿನ ವೇಗದಿಂದ ಚಲಿಸುವಂತೆ ಮಾಡಬೇಕು ಮತ್ತು ವೈರಿಗಳ ಕಡೆಯ ನಿರ್ದಿಷ್ಟ ಗುರಿ ತಲುಪುವಂತೆ ಮಾಡಬೇಕು.
     ರಾಕೆಟ್ಟು ಮತ್ತು ಕ್ಷಿಪಣಿಗಳು ಚಲಿಸುವ ದೂರದ ವ್ಯಾಪ್ತಿ ಬಹಳ ದೊಡ್ಡದು. ಆದರೆ ಅವುಗಳ ಕಾರ್ಯಯೋಜನೆ ಮಾತ್ರ ಬೇರೆಬೇರೆ.ರಾಕೆಟ್ಟುಗಳನ್ನು ಉಪಯೋಗಿಸಿ ಉಪಗ್ರಹಗಳನ್ನು ಉಡಾವಣೆ ಮಾಡಬಹುದು ಹಾಗೆಯೇ ಉಪಕರಣಗಳನ್ನು ಒಯ್ದು ಬೇರೆಬೇರೆ ಗ್ರಹಗಳಿಗಳಿಗೆ ತಲುಪುವಂತೆ ಮಾಡಬಹುದು. ಅದಕ್ಕೆ ರಾಕೆಟ್ಟು ಚಲನೆಯ ಪಥವನ್ನು ಪ್ರಾರಂಭದಲ್ಲಿ  ನಿಯಂತ್ರಿಸಿ ಕಳುಹಿಸಿ ಭೂಮಿಯ ವಾತಾವರಣ ದಾಟುತ್ತಿದ್ದಂತೆ ಅದು ಒಂದೇ ನೇರದಲ್ಲಿ ಚಲಿಸುವುದು. ನಂತರ ಅದರ ಪಥವನ್ನು ಭೂಮಿಯಿಂದ ನಿಯಂತ್ರಿಸಲಾಗುತ್ತದೆ. ಆದರೆ ಕ್ಷಿಪಣಿಯ ಪಥವನ್ನು ಸಂದರ್ಭಕ್ಕೆ ತಕ್ಕಂತೆ ನಿಯಂತ್ರಿಸುತ್ತಾ ಹೋಗುತ್ತಾರೆ. ಈ ನಿಯಂತ್ರಣಾ ಕಾರ್ಯ ಬಹಳ ಸಂಕೀರ್ಣವಾಗಿದೆ.