9. ಕೇಂದ್ರಾಭಿಮುಖಿ ಬಲಕ್ಕೆ ಉದಾಹರಣೆ ಕೊಟ್ಟು ವಿವರಿಸಿ.
ಡಾ|| ಕೆ. ಎಸ್. ಮಲ್ಲೇಶ್, ಪ್ರಾಧ್ಯಾಪಕರು, ಭೌತವಿಜ್ಞಾನ ಅಧ್ಯಯನ ವಿಭಾಗ ಮಾನಸಗಂಗೋತ್ರಿ, ಮೈಸೂರು

ದಾರದ ಒಂದು ತುದಿಗೆ ಗುಂಡು ಕಟ್ಟಿ ಇನ್ನೊಂದು ತುದಿಯನ್ನು ಬಿಗಿಯಾಗಿ ಹಿಡಿದು ಚಿತ್ರ 5 ಮತ್ತು 6 ರಲ್ಲಿ ತೋರಿಸಿರುವಂತೆ ಒಂದು ಕಡೆಗೆ ಬೀಸತೊಡಗಿದಾಗ ಗುಂಡು ವೃತ್ತಾಕಾರದ ಪಥದಲ್ಲಿ ಚಲಿಸುತ್ತದೆ. ದಾರ, ಗಾಜಿನ ಕೊಳವೆ (ಕೆಂಪು), ಕ್ಲಿಪ್ಪು (ನೀಲಿ) ಮತ್ತು ತೂಕದ ಬಟ್ಟುಗಳನ್ನು (ಹಸಿರು) ಉಪಯೋಗಿಸಿ ಸಣ್ಣ ಗುಂಡನ್ನು ವೃತ್ತೀಯ ಚಲನೆಗೈಯುವಂತೆ ಮಾಡುವುದನ್ನು ಚಿತ್ರ 7 ರಲ್ಲಿ ತೋರಿಸಿದೆ. ಎರಡೂ ಸಂದರ್ಭಗಳಲ್ಲಿ ಸಮಜವದಿಂದ ಗುಂಡು ಚಲಿಸ್ಸುತ್ತಿದ್ದಾಗ ದಾರವು ಗುಂಡನ್ನು ವೃತ್ತದ ಕೇಂದ್ರದೆಡೆಗೆ ಸೆಳೆಯುತ್ತದೆ. ಈ ಸೆಳೆತವೇ ಕೇಂದ್ರಾಭಿಮುಖಿ ಬಲ.

ತಿರುವುಗಳಲ್ಲಿ (ಚಿತ್ರ 8) ರಸ್ತೆಯ ಹೊರ ಅಂಚು ಎತ್ತರವಾಗಿದ್ದು ಒಳ ಅಂಚಿನ ಕಡೆಗೆ ಇಳಿಜಾರಾಗಿರುವುದನ್ನು ನೀವು ಗಮನಿಸಿರಬಹುದು. ಇಲ್ಲಿ ಚಲಿಸುವಾಗ ವಾಹನದ ಮೇಲೆ ಎರಡು ಬಲಗಳಿವೆ ವಾಹನದ ತೂಕ ಮತ್ತು ವಾಹನದ ಮೇಲೆ ರಸ್ತೆಯ ಪ್ರತಿಕ್ರಿಯಾ ಬಲ. ನೆಲ ಓರೆಯಾಗಿರುವುದರಿಂದ ಈ ಎರಡು ಬಲಗಳು ಪರಸ್ಪರ ವಿರುದ್ಧ ದಿಕ್ಕಿನಲ್ಲಿರುವುದಿಲ್ಲ. ಇವೆರಡರ ನಿವ್ವಳ ಬಲವೇ ಇಲ್ಲಿ ಕೇಂದ್ರಾಭಿಮುಖಿ ಬಲವಾಗಿ ವರ್ತಿಸುತ್ತದೆ. ಇಳಿಜಾರಿಲ್ಲದೆ ತಿರುವಿನಲ್ಲಿ ರಸ್ತೆ ಸಮತಲವಾಗಿದ್ದರೆ ವಾಹನದ ಇಂಜನ್ನು ಕೇಂದ್ರಾಭಿಮುಖಿ ಬಲವನ್ನುಂಟು ಮಾಡಬೇಕಾಗುತ್ತದೆ. ಆಗ ಹೆಚ್ಚು ಘರ್ಷಣೆಗೆ ಒಳಗಾಗಿ ವಾಹನದ ಚಕ್ರಗಳ ಟೈರುಗಳು ಬೇಗ ಸವೆಯುವುದರ ಜೊತೆಗೆ ರಸ್ತೆಯೂ ಹಾಳಾಗುತ್ತದೆ. ಮೋಜಿನ ಪಾರ್ಕು, ವಸ್ತುಪ್ರದರ್ಶನ ಮುಂತಾದ ಕಡೆ ಇರುವ ಬೃಹದಾಕಾರದ ದೈತ್ಯಚಕ್ರಗಳು (giant wheels), ಅಂಕುಡೊಂಕಾದ ಪಥಗಳಲ್ಲಿ ಚಲಿಸುವ ವಾಹನಗಳು (ಚಿತ್ರ 9 ಮತ್ತು 10) ಕೇಂದ್ರಾಭಿಮುಖಿ ಬಲಗಳಿರುವ ವಕ್ರಚಲನೆಗೆ ಉದಾಹರಣೆಗಳು. ಭೂಮಿಗೆ ಆಧಾರವಾಗಿ ಚಂದ್ರ ಮತ್ತು ಕೃತಕ ಉಪಗ್ರಹಗಳ ಪಥಗಳು (ಚಿತ್ರ 11 ಮತ್ತು 12) ಸರಿಸುಮಾರಾಗಿ ವೃತ್ತಗಳೆಂದು ಭಾವಿಸಿದಲ್ಲಿ ಈ ಕಣಗಳ ಮೇಲಿರುವ ಭೂಮಿಯ ಗುರುತ್ವಾಕರ್ಷಣಬಲವೇ ಕೇಂದ್ರಾಭಿಮುಖಿ ಬಲವಾಗಿದೆ ಎಂಬುದನ್ನು ಗ್ರಹಿಸಬೇಕು.

ತಿರುವುಗಳಲ್ಲಿ (ಚಿತ್ರ 8) ರಸ್ತೆಯ ಹೊರ ಅಂಚು ಎತ್ತರವಾಗಿದ್ದು ಒಳ ಅಂಚಿನ ಕಡೆಗೆ ಇಳಿಜಾರಾಗಿರುವುದನ್ನು ನೀವು ಗಮನಿಸಿರಬಹುದು. ಇಲ್ಲಿ ಚಲಿಸುವಾಗ ವಾಹನದ ಮೇಲೆ ಎರಡು ಬಲಗಳಿವೆ ವಾಹನದ ತೂಕ ಮತ್ತು ವಾಹನದ ಮೇಲೆ ರಸ್ತೆಯ ಪ್ರತಿಕ್ರಿಯಾ ಬಲ. ನೆಲ ಓರೆಯಾಗಿರುವುದರಿಂದ ಈ ಎರಡು ಬಲಗಳು ಪರಸ್ಪರ ವಿರುದ್ಧ ದಿಕ್ಕಿನಲ್ಲಿರುವುದಿಲ್ಲ. ಇವೆರಡರ ನಿವ್ವಳ ಬಲವೇ ಇಲ್ಲಿ ಕೇಂದ್ರಾಭಿಮುಖಿ ಬಲವಾಗಿ ವರ್ತಿಸುತ್ತದೆ. ಇಳಿಜಾರಿಲ್ಲದೆ ತಿರುವಿನಲ್ಲಿ ರಸ್ತೆ ಸಮತಲವಾಗಿದ್ದರೆ ವಾಹನದ ಇಂಜನ್ನು ಕೇಂದ್ರಾಭಿಮುಖಿ ಬಲವನ್ನುಂಟು ಮಾಡಬೇಕಾಗುತ್ತದೆ. ಆಗ ಹೆಚ್ಚು ಘರ್ಷಣೆಗೆ ಒಳಗಾಗಿ ವಾಹನದ ಚಕ್ರಗಳ ಟೈರುಗಳು ಬೇಗ ಸವೆಯುವುದರ ಜೊತೆಗೆ ರಸ್ತೆಯೂ ಹಾಳಾಗುತ್ತದೆ.

ಮೋಜಿನ ಪಾರ್ಕು, ವಸ್ತುಪ್ರದರ್ಶನ ಮುಂತಾದ ಕಡೆ ಇರುವ ಬೃಹದಾಕಾರದ ದೈತ್ಯಚಕ್ರಗಳು (giant wheels), ಅಂಕುಡೊಂಕಾದ ಪಥಗಳಲ್ಲಿ ಚಲಿಸುವ ವಾಹನಗಳು (ಚಿತ್ರ 9 ಮತ್ತು 10) ಕೇಂದ್ರಾಭಿಮುಖಿ ಬಲಗಳಿರುವ ವಕ್ರಚಲನೆಗೆ ಉದಾಹರಣೆಗಳು. ಭೂಮಿಗೆ ಆಧಾರವಾಗಿ ಚಂದ್ರ ಮತ್ತು ಕೃತಕ ಉಪಗ್ರಹಗಳ ಪಥಗಳು (ಚಿತ್ರ 11 ಮತ್ತು 12) ಸರಿಸುಮಾರಾಗಿ ವೃತ್ತಗಳೆಂದು ಭಾವಿಸಿದಲ್ಲಿ ಈ ಕಣಗಳ ಮೇಲಿರುವ ಭೂಮಿಯ ಗುರುತ್ವಾಕರ್ಷಣಬಲವೇ ಕೇಂದ್ರಾಭಿಮುಖಿ ಬಲವಾಗಿದೆ ಎಂಬುದನ್ನು ಗ್ರಹಿಸಬೇಕು.

ಕೇಂದ್ರಾಭಿಮುಖಿ ಬಲದ ಪರಿಕಲ್ಪನೆಯನ್ನು ಅಧಾರವಾಗಿಟ್ಟುಕೊಂಡು ದ್ರಾವಣಗಳ ಒಳಗಿರುವ ಹಗುರ ಹಾಗೂ ಭಾರದ ಲವಣ ಮುಂತಾದ ಪದಾರ್ಥಗಳನ್ನು ಬೇರ್ಪಡಿಸುವ ‘ಸೆಂಟ್ರಿಫ್ಯೂಜ್’ (ಚಿತ್ರ 13) ಎಂಬ ಸಾಧನವನ್ನು ರೂಪಿಸಲಾಗಿದೆ. ಚಿತ್ರದಲ್ಲಿ ಕಾಣುವ ಕೈ ಹಿಡಿಯನ್ನು ಜೋರಾಗಿ ತಿರುಗಿಸಿದಾಗ ನೆಲಕ್ಕೆ ಸಮಾಂತರವಾದ ಸಮತಲದಲ್ಲಿ ಲವಣಪೂರಿತ ದ್ರಾವಣವಿರುವ ನಾಲ್ಕೂ ಪ್ರಣಾಳಗಳು ಸುತ್ತತೊಡಗುತ್ತವೆ. ಲವಣಗಳ ಮೇಲೆ ದ್ರಾವಣದ ಬಲಪ್ರಯೋಗವಾಗಿ ಹಗುರವಾದ ಲವಣ ದ್ರಾವಣದ ಮೇಲ್ಮೈಯಲ್ಲೂ ಭಾರವಾದ ಲವಣ ದ್ರಾವಣದ ತಳದಲ್ಲೂ ಶೇಖರಣೆಯಾಗುತ್ತವೆ.