46. ನಕ್ಷತ್ರ ಎಂದರೇನು?
ಡಾ|| ಎಂ.ಎಸ್.ಚಂದ್ರಶೇಖರ, ಭೌತವಿಜ್ಞಾನ ಅಧ್ಯಯನ ವಿಭಾಗ, ಮೈಸೂರು ವಿಶ್ವವಿದ್ಯಾನಿಲಯ

ರಾತ್ರಿಯ ವೇಳೆ ಆಕಾಶದ ಕಡೆಗೆ ತಲೆ ಎತ್ತಿ ನೋಡಿದರೆ, ಅಸಂಖ್ಯಾತ ನಕ್ಷತ್ರಗಳು ಕಾಣಿಸಿತ್ತವೆ. ನಕ್ಷತ್ರ ಎಂದರೆ ಏನು ಎಂಬ ಪ್ರಶ್ನೆಗೆ ವೈಜ್ಞಾನಿಕ ಉತ್ತರವನ್ನು ಹುಡುಕುವುದಾದರೆ, ನಕ್ಷತ್ರವನ್ನು ಹೈಡ್ರೊಜನ್ (ಜಲಜನಕ) ಮತ್ತು ಹೀಲಿಯಂ ಅನಿಲಗಳಿಂದಾದ ನ್ಯೂಕ್ಲಿಯರ್ ಸಂಯೋಜನೆ ಕ್ರಿಯೆಗೆ ಪೂರಕವಾದ ವಾತಾವರಣವನ್ನು(ಅತಿ ಹೆಚ್ಚಿನ ತಾಪ ಮತ್ತು ಒತ್ತಡ) ಹೊಂದಿರುವ ದೊಡ್ಡ ಗಾತ್ರದ ಚಂಡು ಎಂದು ಹೇಳಬಹುದು. ಸೂರ್ಯನೂ ಸಹ ಇತರೆ ನಕ್ಷತ್ರಗಳಂತೆಯೆ ಸಾಮಾನ್ಯ ಗಾತ್ರದ ನಕ್ಷತ್ರ. ನಕ್ಷತ್ರಗಳು ನಮ್ಮಿಂದ ಬಹಳ ದೂರದಲ್ಲಿರುವುದರಿಂದ ಚಿಕ್ಕದಾಗಿ ಕಾಣಿಸುತ್ತವೆಯಾದರೂ ಬಹಳಷ್ಟು ನಕ್ಷತ್ರಗಳು ಸೂರ್ಯನಿಗಿಂತ ಬಹಳ ದೊಡಾದಾಗಿ ಮತ್ತು ಪ್ರಕಾಶಮಾನವಾಗಿವೆ. ನಕ್ಷತ್ರಗಳಲ್ಲಿ ಶಾಖ ಮತ್ತು ಬೆಳಕು ನ್ಯೂಕ್ಲಿಯ ಸಂಯೋಜನೆ ಕ್ರಿಯೆಯಿಂದ ದೊರೆಯುತ್ತದೆ.