6. ಗಡಸು ನೀರು ಹೇಗೆ ಉಂಟಾಗುತ್ತದೆ?
ಡಾ. ಜಿ.ಆರ್. ಪ್ರಕಾಶ್ ರಸಾಯನ ಶಾಸ್ತ್ರದ ಸಹ ಪ್ರಾಧ್ಯಾಪಕರು ರೀಜನಲ್ ಇನ್ ಸ್ಟಿಟ್ಯೂಟ್ ಆಫ್ ಎಜುಕೇಶನ್, ಮೈಸೂರು

ಮಳೆ ನೀರು ಪ್ರಕೃತಿಯಲ್ಲಿ ಸಿಗುವ ಅತ್ಯಂತ ದ್ಧ ಜಲ. ನದಿಯ ನೀರು ಹರಿಯುವಾಗ ಅನೇಕ ಕಲ್ಮಗಳನ್ನು ಸೇರಿಸಿಕೊಳ್ಳುತ್ತದೆ. ಭೂಮಿಯ ಅನೇಕ ಲವಣಗಳು ನೀರಿನಲ್ಲಿ ಕರಗಿಕೊಳ್ಳುತ್ತವೆ. ಅಂತರ್ಜಲಗಳಲ್ಲಿ ಬಂಡೆಗಳಿಂದ, ಖನಿಜಗಳಿಂದ ಇನ್ನೂ ಹೆಚ್ಚು ಲವಣಗಳು ಕರಗುತ್ತವೆ. ಆದ್ದರಿಂದ ಸಾಮಾನ್ಯವಾಗಿ ಮಳೆ ನೀರು, ನದಿ ನೀರು ಅಷ್ಟಾಗಿ ಗಡುಸಾಗಿರುವುದಿಲ್ಲ. ಭಾವಿ, ನೀರು ಹೆಚ್ಚು ಗಡಸಾಗಿರುತ್ತವೆ. ಕಾರಣ ಇದರಲ್ಲಿ ಕ್ಯಾಲ್ಶಿಯಂ / ಮೆಗ್ನೀಷಿಯಂ ಕ್ಲೋರೈಡ್, ಬೈಕಾರ್ಬೊನೇಟ್ ಅಥವಾ ಸಲ್ಫೇಟ್ ಕರಗಿರುತ್ತವೆ.