7. ಪರಮಾಣುವಿನಲ್ಲಿ s,p,d,f orbital ಎಂದರೇನು?
ಡಾ. ಜಿ.ಆರ್. ಪ್ರಕಾಶ್ ರಸಾಯನ ಶಾಸ್ತ್ರದ ಸಹ ಪ್ರಾಧ್ಯಾಪಕರು ರೀಜನಲ್ ಇನ್ ಸ್ಟಿಟ್ಯೂಟ್ ಆಫ್ ಎಜುಕೇಶನ್, ಮೈಸೂರು

ಒಂದು ಪರಮಾಣುವಿನಲ್ಲಿರುವ ಎಲ್ಲಾ ಎಲೆಕ್ಟ್ರಾನ್ ಗಳು ಅದರ ನ್ಯೂಕ್ಲಿಯಸ್ ಸುತ್ತ ಸುತ್ತುತ್ತಿರುತ್ತವೆ. ಆದರೆ ಅವುಗಳ ‎ಶಕ್ತಿಯ ಹಂತ ವ್ಯತ್ಯಾಸವಿದ್ದಾಗ ಅವುಗಳ ಚಲನೆಯ ರೀತಿ, ನ್ಯೂಕ್ಲಿಯಸ್ ನಿಂದಿರುವ ದೂರ ಇವುಗಳೂ ವ್ಯತ್ಯಾಸವಾಗುತ್ತವೆ. ಶ್ಕಿಕ್ತಿಯ ಹಂತವನ್ನಾಧರಿಸಿ K, L, M,N…ಮುಂತಾದ ಮಟ್ಟಗಳಲ್ಲಿ ಎಲೆಕ್ಟ್ರಾನ್ಗಳು ಸಂಚರಿಸುತ್ತವೆ ಪರಮಾಣುಗಳ ರೇಖಾಪಟಲದಿಂದ ತಿಳಿಯುತ್ತದೆ. ಈ ಹಂತಗಳಲ್ಲಿರಬಹುದಾದ ಉಪಹಂತಗಳನ್ನೂ ಗುರುತಿಸಲಾಗಿದೆ. K ಹಂತದಲ್ಲಿ ಒಂದು ಉಪಹಂತ( s ), L ಹಂತದಲ್ಲಿ 2 ಉಪಹಂತ ( s, p), M ಹಂತದಲ್ಲಿ 3 ಉಪಹಂತ (s,p,d ), N ಹಂತದಲ್ಲಿ 4 ಉಪಹಂತ ( s,p,d,f ) ಇವೆ. ಈ ಉಪಹಂತಗಳ ಆಕೃತಿಗಳು ಬೇರೆ ಬೇರೆಯಾಗಿವೆ(s ಗೋಲಾಕಾರ, P ಡಂಬೆಲ್ ಆಕಾರ ಇತ್ಯಾದಿ). ಉಪಹಂತಗಳು ಅವುಗಳ ಅಕ್ಷೆಗಳನ್ನು ಅವಲಂಬಿಸಿ ಕಕ್ಷಕಗಳನ್ನು ಹೊಂದಿವೆ. s ನಲ್ಲಿ 1 , P ನಲ್ಲಿ 3 , d ನಲ್ಲಿ 5 ಹಾಗೂ f ನಲ್ಲಿ 7 ಕಕ್ಷಕಗಳನ್ನು ಹೊಂದಿವೆ. ಪ್ರತಿ ಕಕ್ಷಕದಲ್ಲೂ 2 ಎಲೆಕ್ಟ್ರಾನ್ ಮಾತ್ರ ಸಂಚರಿಸುತ್ತವೆ. ಆದ್ದರಿಂದ s ನಲ್ಲಿ 2, p ನಲ್ಲಿ 6, d ನಲ್ಲಿ 10 ಹಾಗೂ f 14 ಎಲೆಕ್ಟ್ರಾನ್ಗಳು ಇರಲು ಸಾಧ್ಯ.