8. ನೀರಿನಲ್ಲಿ ಜಲಜನಕ ಬಂಧವಿದೆ ಎಂದು ಹೇಗೆ ಗುರುತಿಸುವಿರಿ?
ಡಾ. ಜಿ.ಆರ್. ಪ್ರಕಾಶ್ ರಸಾಯನ ಶಾಸ್ತ್ರದ ಸಹ ಪ್ರಾಧ್ಯಾಪಕರು ರೀಜನಲ್ ಇನ್ ಸ್ಟಿಟ್ಯೂಟ್ ಆಫ್ ಎಜುಕೇಶನ್, ಮೈಸೂರು

ನೀರಿನ ಸೂತ್ರ H2O. ಎರಡು ಜಲಜನಕದ ಪರಮಾಣುಗಳು ಒಂದು ಆಮ್ಲಜನಕದ ಪಾರಮಾಣುವಿನೊಂದಿಗೆ ಸೇರಿದೆ. ಆಮ್ಲಜನಕದ ಗುಂಪಿನಲ್ಲೇ(ಆವರ್ತನ ಕೋ‎ಶದಲ್ಲಿ) ಇರುವ ಗಂಧಕವೂ ಜಲಜನಕದೊಂದಿಗೆ ಇದೇ ರೀತಿಯ ಸಂಯುಕ್ತವನ್ನು(H2S ) ಕೊಡುತ್ತದೆ. H2S ಒಂದು ಅನಿಲ ಆದರೆ H2O ಒಂದು ದ್ರವ. ಅಷ್ಟೇ ಅಲ್ಲ ನೀರಿನ ಕುದಿಯುವ ಬಿಂದು ಸಾಕಷ್ಟು ಹೆಚ್ಚಿನದಾಗಿದೆ(1000C). ಇದಕ್ಕೆ ಕಾರಣವೆಂದರೆ H2O ಅಣುಗಳು ದೃವೀಯವಾಗಿದ್ದು ಪರಸ್ಪರಗಳ ನಡುವೆ ಜಲಜನಕಬಂಧ(Hydrogen Bond) ಏರ್ಪಡಲು ಸಹಕಾರಿಯಾಗಿದೆ. ಆಮ್ಲಜನಕ ಗಂಧಕದ ಪರಮಾಣುವಿಗಿಂತ ಗಾತ್ರದಲ್ಲಿ ಚಿಕ್ಕದಾಗಿದ್ದು ಎಲೆಕ್ಟ್ರಾನ್ಗಳನ್ನು ‎ಹೆಚ್ಚಾಗಿ ಆಕರ್ಷಿಸುತ್ತದೆ.

ನೀರಿನಲ್ಲಿ ಎಲ್ಲಾ ಪರಮಾಣುಗಳೂ ಸರಳ ರೇಖೆಯಲ್ಲಿರದೆ ಬಾಗಿದ ಆಕೃತಿಯಿದೆ. HOH ಕೋನ 104.50 ಎಂದು ಪ್ರಯೋಗಗಳಿಂದ ತಿಳಿದಿವೆ. O ಭಾಗ ಸ್ವಲ್ಪ ಋಣವಿದ್ಯುತ್ ಹೊಂದಿದ್ದು H ಸ್ವಲ್ಪ ಭಾಗ ಧನವಿದ್ಯುತ್ ಹೊಂದಿರುತ್ತವೆ. ಹೀಗಾಗಿ ಜಲಜನಕಬಂಧವೇರ್ಪಟ್ಟು ನೀರಿನ ಕುದಿಯುವ ಬಿಂದು ಹೆಚ್ಚಾಗಿರಲು ಕಾರಣವಾಗಿದೆ.