9. ಡಿ.ಎನ್.ಎ ಎಂದರೇನು ಮತ್ತು ಅದು ಯಾವ ಆಕಾರದಲ್ಲಿದೆ?
ಡಾ. ಎಸ್. ಶಶಿಕಾ0ತ್, ರಸಾಯನ ಶಾಸ್ತ್ರ ಪ್ರಾಧ್ಯಾಪಕರು, ಮೈಸೂರು ವಿಶ್ವವಿಧ್ಯಾನಿಲಯ, ಮಾನಸಗ0ಗೋತ್ರಿ, ಮೈಸೂರು

ಡಿಎನ್ಎ (DNA) ಅಂದರೆ ಡಿಆಕ್ಸಿರೈಬೋಸ್ ನ್ಯೂಕ್ಲಿಯಿಕ್ ಆಸಿಡ್. ಇದು ಜೀವಕೋಶದ ಒಳಗಡೆ ಇರುವ ನ್ಯೂಕ್ಲಿಯಸ್ನಲ್ಲಿ ಕೆಲವು ರೀತಿಯ ಪ್ರೋಟೀನುಗಳ ಜೊತೆಯಲ್ಲಿ ಇರುತ್ತದೆ. ಡಿಎನ್ಎಯು ಒಂದು ಜೀವಿಯ ಎಲಾ ್ಲಗುಣ-ಲಕ್ಷಣಗಳಿಗೆ ವಂಶವಾಹಿಯಾಗಿರುತ್ತದೆ. ಡಿಎನ್ಎಯ ರಚನೆಯನ್ನು 1953 ನೇ ಇಸವಿಯಲ್ಲಿ ಅಮೇರಿಕದ ವಾಟ್ಸನ್ ಮತ್ತು ಕ್ರಿಕ್ ಎಂಬುವರು ಸಂಶೋಧನೆಯ ಮೂಲಕ ಸಾಬೀತುಪಡಿಸಿದರು. ಈ ರಚನೆಯ ಕುರಿತಾದ ಸಂಶೋಧನೆಯಲ್ಲಿ ರೊಸಲಿನ್ ಫ್ರಾಂಕ್ಲಿನ್ ಮತ್ತು ಮೊರಿಸ್ ವಿಲ್ಕಿನ್ಸ್ ಕೂಡ ಭಾಗಿಯಾಗಿದ್ದರು. ಇವರ ಸಂಶೋಧನೆಯ ಪ್ರಕಾರ ಡಿಎನ್ಎಯು ನ್ಯೂಕ್ಲಿಯೋಟೈಡುಗಳಿಂದ ಮಾಡಲ್ಪಟ್ಟ ಒಂದು ಜೈವಿಕ ಪಾಲಿಮರ್ ಆಗಿದೆ. ಮಾನವನ ಜೀವಕೋಶದಲ್ಲಿರುವ ಡಿಎನ್ಎಯಲ್ಲಿ ಸುಮಾರು ಮೂರು ಬಿಲಿಯ ಅಂದರೆ 300 ಕೋಟಿ ಜೊತೆ ನ್ಯೂಕ್ಲಿಯೋಟೈಡುಗಳು ಒಂದಕ್ಕೊಂದು ಕೊಂಡೀಕರಣಗೊಂಡಿರುತ್ತವೆ. ನ್ಯೂಕ್ಲಿಯೋಟೈಡ್ ಅಂದರೆ ಪೆಂಟೋಸ್ ಶರ್ಕರ, ಫಾಸ್ಫೇಟ್ ಮತ್ತು ಪ್ಯೂರೀನ್-ಪಿರಿಮಿಡೀನ್ ಕ್ಷಾರಗಳೆಂಬ ಮೂರು ರೀತಿಯ ರಾಸಾಯನಿಕಗಳಿಂದ ಮಾಡಲ್ಪಟ್ಟಿದೆ. ನಾಲ್ಕು ರೀತಿಯ ನ್ಯೂಕ್ಲಿಯೋಟೈಡುಗಳು ಮಾನವನ ದೇಹದಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಅವು ಯಾವುವೆಂದರೆ, ಅಡೆನಿಲಿಕ್ ಆಮ್ಲ, ಗ್ವಾನಿಲಿಕ್ ಆಮ್ಲ, ತೈಮಿಡಿಲಿಕ್ ಆಮ್ಲ ಹಾಗೂ ಸೈಟಿಡಿನಿಲಿಕ್ ಆಮ್ಲ. ಈ ಪಾಲಿಮರ್ಗಳ ಎರಡು ಸರಗಳು ಜೊತೆಯಾಗಿ ತಿರುಚಿರುವ ಏಣಿಯ ರೂಪದಲ್ಲಿ ಕಂಡುಬರುತ್ತವೆ. ಪ್ಯೂರೀನ್ನಲ್ಲಿ ಅಡೆನಿನ್ ಮತ್ತು ಗ್ವಾನಿನ್, ಪಿರಿಮಿಡೀನ್ನಲ್ಲಿ ಸೈಟೋಸಿನ್ ಮತ್ತು ತೈಮೀನ್ ಎಂಬ ಕ್ಷಾರಗಳಿರುತ್ತವೆ. ಈ ಕ್ಷಾರಗಳು ಪೆಂಟೋಸ್ ಎಂಬ ಶರ್ಕರದ ಜೊತೆಗೆ ಸಂಯೋಜನೆಗೊಂಡು ನ್ಯೂಕ್ಲಿಯೋಸೈಡುಗಳಾಗುತ್ತವೆ. ಹಾಗೆಯೇ, ನ್ಯೂಕ್ಲಿಯೋಸೈಡುಗಳು ಫಾಸ್ಫೇಟುಗಳ ಜೊತೆ ಸಂಯೋಜನೆಗೊಂಡು ನ್ಯೂಕ್ಲಿಯೋಟೈಡುಗಳಾಗುತ್ತವೆ. ಇವುಗಳ ರಾಸಾಯನಿಕ ರಚನಾರೂಪವನ್ನು ಈ ಕೆಳಗಿನ ಚಿತ್ರದಲ್ಲಿ ತೋರಿಸಲಾಗಿದೆ.

ಗ್ವಾನಿನ್, ಸೈಟೋಸಿನ್ ಮತ್ತು ತೈಮೀನ್ಗಳು ಪೆಂಟೋಸ್ ಶರ್ಕರದ ಜೊತೆಗೆ ಸಂಯೋಜನೆಗೊಂಡು ಅನುಕ್ರಮವಾಗಿ ಗ್ವಾನೋಸಿನ್, ಸೈಟಿಡಿನ್ ಮತ್ತು ತೈಮಿಡಿನ್ಗಳೆಂಬ ನ್ಯೂಕ್ಲಿಯೋಸೈಡುಗಳಾಗಿ ನಂತರ ಫಾಸ್ಫೇಟುಗಳ ಜೊತೆ ಸಂಯೋಜನೆಗೊಂಡು ಅನುಕ್ರಮವಾಗಿ ಅಡೆನಿಲಿಕ್ ಆಮ್ಲ, ಗ್ವಾನಿಲಿಕ್ ಆಮ್ಲ, ಸೈಟಿಡಿನಿಲಿಕ್ ಆಮ್ಲ ಹಾಗೂ ತೈಮಿಡಿಲಿಕ್ ಆಮ್ಲಗಳೆಂಬ ನ್ಯೂಕ್ಲಿಯೋಟೈಡುಗಳಾಗುತ್ತವೆ. ಈ ಜೈವಿಕ ಪಾಲಿಮರ್ಗಳು ಉದ್ದನೆಂiÀi ಸರಪಳಿಯ ರೂಪದಲ್ಲಿ ಒಂದಕ್ಕೊಂದು ತಾಗಿಕೊಂಡಿರುತ್ತವೆ. ಒಂದು ಸರಪಳಿಯಲ್ಲಿರುವ ಕ್ಷಾರಗಳು ಇನ್ನೊಂದು ಸರಪಳಿಯಲ್ಲಿರುವ ಕ್ಷಾರಗಳೊಂದಿಗೆ ಜಲಜನಕದ ಬಂಧಗಳ ಮೂಲಕ ಬೆಸೆದುಕೊಂಡಿರುತ್ತವೆ. ಡಿಎನ್ಎ ಯು ತಿರುಚಿದ ಏಣಿಯ ರೂಪವನ್ನು ಪಡೆಯಲು ಈ ಜಲಜನಕದ ಬಂಧಗಳೇ ಕಾರಣವಾಗಿವೆ.

ಭಾರತದ ಖ್ಯಾತ ಪರಮಾಣುಜೀವವಿಜ್ಞಾನಿ ಹರಗೋವಿಂದ ಖುರಾನ ಅವರಿಗೆ ಪಾಲಿನ್ಯೂಕ್ಲಿಯೋಟೈಡುಗಳ ಉತ್ಪಾದನೆಯ ಕುರಿತ ಸಂಶೋಧನೆಗೆ 1968 ರಲ್ಲಿ ಪ್ರತಿಷ್ಠಿತ ನೋಬೆಲ್ ಪ್ರಶಸ್ತಿ ಲಭಿಸಿರುವುದನ್ನು ನಾವಿಲ್ಲಿ ಸ್ಮರಿಸಬಹುದಾಗಿದೆ. ಅವರು ಆನುವಂಶಿಕ ಸಂಕೇತಭಾಷೆಯನ್ನು ಅಂದರೆ ಜೀವಕೋಶದೊಳಗೆ ನ್ಯೂಕ್ಲಿಯಿಕ್ ಆಮ್ಲವು ಪ್ರೋಟೀನ್ ಅಣುವಿನ ಸಂಶ್ಲೇಷಣೆಯನ್ನು ನಿರ್ದೇಶಿಸುವ ಸಂದರ್ಭದಲ್ಲಿ ನ್ಯೂಕ್ಲಿಯಿಕ್ ಆಮ್ಲದಲ್ಲಿನ ನ್ಯೂಕ್ಲಿಯೋಟೈಡುಗಳ ಅನುಕ್ರಮಕ್ಕೂ ಆ ನ್ಯೂಕ್ಲಿಯಿಕ್ ಆಮ್ಲದ ನಿರ್ದೇಶನದಲ್ಲಿ ಸಂಶ್ಲೇಷಣೆಗೊಳ್ಳುವ ಪ್ರೋಟೀನ್ನಲ್ಲಿನ ಅಮಿನೋ ಆಮ್ಲಗಳ ಅನುಕ್ರಮಕ್ಕೂ ಇರುವ ಸಂಬಂಧವನ್ನು ಸೂಚಿಸುವ ‘ಸಂಕೇತ’ಗಳ ವ್ಯವಸ್ಥೆಯನ್ನು ವಿವರಿಸಿದರು. ಅಲ್ಲದೇ, ಎರಡು ಡಿಎನ್ಎ ತಂತುಗಳನ್ನು ಸೇರಿಸುವ ‘ಡಿಎನ್ಎ ಲಿಗೇಸ್’ ಎಂಬ ಕಿಣ್ವವನ್ನು ಪ್ರಥಮಬಾರಿಗೆ ಪ್ರತ್ಯೇಕಿಸಿ ಅದರ ರಚನೆಯನ್ನು ವಿವರಿಸಿದರು.