10. ಗಂಧಕ ಮನುಷ್ಯನಿಗೆ ಏಕೆ ಬೇಕು? ಗಂಧಕವನ್ನು ಹೇಗೆ ಪಡೆಯಬಹುದು? ಗಂಧಕದ ಇತರೆ ಉಪಯೋಗಗಳೇನು?
ಡಾ. ಎಸ್. ಶಶಿಕಾ0ತ್, ರಸಾಯನ ಶಾಸ್ತ್ರ ಪ್ರಾಧ್ಯಾಪಕರು, ಮೈಸೂರು ವಿಶ್ವವಿಧ್ಯಾನಿಲಯ, ಮಾನಸಗ0ಗೋತ್ರಿ, ಮೈಸೂರು

ಗಂಧಕ ಭೂಮಿಯಲ್ಲಿರುವ ಹಲವಾರು ಮೂಲವಸ್ತುಗಳ ಪೈಕಿ ಒಂದು. ಇದು ಭೂಗರ್ಭದಲ್ಲಿ ಮೂಲರೂಪದಲ್ಲಿಯೂ, ಸಲ್ಫೈಡ್ ರೂಪದಲ್ಲಿಯೂ ಹಾಗೂ ಸಲ್ಫೇಟ್ ರೂಪದಲ್ಲಿಯೂ ಹೇರಳವಾಗಿ ಸಿಗುತ್ತದೆ. ಮೂಲರೂಪವು ಹಳದಿ ಬಣ್ಣವಾಗಿದ್ದು, ಹರಳು ಮತ್ತು ಪುಡಿ ರೂಪದಲಿ ಇರುತ್ತದೆ. ಇದರ ವಾಸನೆಯು ಕೆಟ್ಟದ್ದಾಗಿರುತ್ತದೆ.

ಗ0ಧಕವು ಈ ಭೂಮ0ಡಲದಲ್ಲಿರುವ ಎಲ್ಲಾ ಪ್ರಾಣಿ, ಪಕ್ಷಿ, ಮರ, ಗಿಡ, ಸೂಕ್ಷ್ಮಾಣುಜೀವಿಗಳಲ್ಲಿ ಮೂಲ ರೂಪದಲ್ಲಿರದೆ, ಬೇರೆ ಬೇರೆ ಅಣುಗಳ ಜೊತೆ ಸ0ಯೋಜನೆಗೊ0ಡು ಪ್ರೋಟೀನುಗಳು, ಸಿಸ್ಟೀನ್ ಮತ್ತು ಮೆಥಿಯೋನಿನ್ ಎ0ಬ ಅಮಿನೋ ಆಮ್ಲಗಳು ಹಾಗೂ ಬೇರೆ ಬೇರೆ ರಾಸಾಯನಿಕ ಸ0ಯುಕ್ತಗಳ ರೂಪದಲ್ಲಿ ಇರುತ್ತದೆ. ಪ್ರಾಚೀನ ಗ್ರೀಕರಿಗೆ ಮತ್ತು ರೋಮನ್ನರಿಗೆ ತಿಳಿದಿದ್ದ ಈ ಗ0ಧಕ, ಔಷಧಿಗಳ ತಯಾರಿಕೆಯಲ್ಲಿ ಬಳಕೆಯಾಗುತ್ತಿತ್ತು.

ಆಹಾರಗಳ ಪೈಕಿ ಮೀನು, ಮಾ0ಸ, ಮೊಟ್ಟೆ, ಹಾಲು, ಗೆಡ್ಡೆ-ಗೆಣಸು, ಬೆಳ್ಳುಳ್ಳಿ, ಈರುಳ್ಳಿ, ಕೋಸು, ಬೇಳೆ-ಕಾಳುಗಳಲ್ಲಿ ಹೇರಳವಾಗಿದೆ. ಗಂಧಕದ ಕೊರತೆಯಿಂದಾಗಿ ಮಾನವನ ದೇಹದಲ್ಲಿ ಮಾಂಸಖಂಡಗಳ ಸೆಳೆತ, ಚರ್ಮರೋಗ, ನರದೌರ್ಬಲ್ಯ, ರಕ್ತಸ0ಚಾರದಲ್ಲಿ ತಡೆ, ಸ0ಧಿವಾತ, ಬಾವು, ಅಜೀರ್ಣ, ಚರ್ಮ ಸುಕ್ಕುಗಟ್ಟುವಿಕೆ ಇತ್ಯಾದಿ ರೋಗಗಳು ಕಾಣಿಸಿಕೊಳ್ಳುತ್ತವೆ. ಗ0ಧಕದ ಅ0ಶ ಹೆಚ್ಚಿರುವ ಆಹಾರಗಳನ್ನು ಸೇವಿಸಿದಲ್ಲಿ ಮುದಿವಯಸ್ಸಿನಲ್ಲಿ ಬರುವ0ತಹ ಚರ್ಮ ಸುಕ್ಕುಗಟ್ಟುವಿಕೆ, ಸ0ಧಿವಾತ ಮು0ತಾದ ರೋಗಗಳನ್ನು ತಡೆಗಟ್ಟಬಹುದು. ಗ0ಧಕವು ಮಾನವನ ದೇಹದಲ್ಲಿರುವ ವಿಷಾಣುಗಳನ್ನು ನಿರ್ಮೂಲನೆ ಮಾಡುತ್ತದೆ. ಇಷ್ಟೇ ಅಲ್ಲದೇ, ಸಿಡಿಮದ್ದು, ತುಪಾಕಿ ಮದ್ದುಗಳ ತಯಾರಿಕೆ, ರಸಗೊಬ್ಬರ, ಬೆ0ಕಿಪೊಟ್ಟಣ ತಯಾರಿಕೆ, ಕೀಟನಾಶಕಗಳು, ರಬ್ಬರಿನ ವಲ್ಕನೀಕರಣ (ರಬ್ಬರನ್ನು ಕಠಿಣವಾಗಿಸುವ ಕ್ರಿಯೆ), ಗ0ಧಕಾಮ್ಲ ತಯಾರಿಕೆ, ಮಾರ್ಜಕಗಳ ತಯಾರಿಕೆ, ಮತ್ತು ಶಿಲೀ0ದ್ರನಾಶಕಗಳ ತಯಾರಿಕೆಯಲ್ಲಿಯೂ ಗ0ಧಕವನ್ನು ಉಪಯೋಗಿಸುತ್ತಾರೆ.