4. ಒಂದು ಸಂಖ್ಯೆಯನ್ನು ಸೊನ್ನೆಯಿಂದ ಭಾಗಿಸಲು ಸಾಧ್ಯವೇ?
ದೀಕ್ಷಿತ್

ಇದಕ್ಕೆ ಅರ್ಥವೇ ಇಲ್ಲ.

ಭಾಗಿಸುವುದು ಎನ್ನುವ ಕ್ರಿಯೆಯಲ್ಲಿ ಭಿನ್ನರಾಶಿ ಎನ್ನುವ ಪರಿಕಲ್ಪನೆ ಅಂತರ್ಗತವಾಗಿದೆ. 1/2 ಎಂದರೆ 1 ನ್ನು ಎರಡು ಭಾಗಮಾಡಿ ಒಂದು ಭಾಗ ತೆಗೆದಿಕೊ. 25/50 ಎಂದರೆ 1 ನ್ನು 50 ಭಾಗ ಮಾಡಿ 25 ಭಾಗಗಳನ್ನು ಪರಿಗಣಿಸಿ. 52/25 ಅನ್ನು ತೆಗೆದು ಕೊಂಡಾಗ ಅದನ್ನು ನಾವು 2 2/25 ಅಂದರೆ 52 ಅನ್ನು 25 ರಂತೆ ಎರಡು ಭಾಗಮಾಡಿ ಉಳಿದ 2 ಅನ್ನು 25 ಭಾಗಮಾಡಿ ಎರಡು ಭಾಗವನ್ನು ಪರಿಗಣಿಸಿ. 5/0 ಎಂಬುದನ್ನು ಪರಿಗಣಿಸಿದಾಗ 5 ಅನ್ನು ಸೊನ್ನೆ ಭಾಗ ಮಾಡು ಎಂದು ಅರ್ಥವಾಗುತ್ತದೆ. ಅಂದರೆ ಇದಕ್ಕೆ ಅರ್ಥವೇ ಇಲ್ಲ. ಆಲ್ಲದೆ ಮೂಲತಃ ಒಂದು ಭಿನ್ನರಾಶಿಗೆ ಅರ್ಥ ಬರಬೇಕಾದರೆ ಅದರ ಛೇದದಲ್ಲಿ ಸೊನ್ನೆಗೆ ಪ್ರವೇಶವಿಲ್ಲ.