2. ಸಸ್ಯ ಕೋಶಗಳಲ್ಲಿರುವ ಕ್ಲೋರೋಪ್ಲಾಸ್ಟ್ ಪ್ರಾಣಿ ಜೀವಕೋಶಗಳಲ್ಲಿದರೆ ಸಸ್ಯಗಳಂತೆ ಪ್ರಾಣಿಗಳೂ ಆಹಾರ ತಯಾರಿಸಬಹುದೆ?
ಪ್ರೊ. ಎಸ್.ಆರ್. ರಮೇಶ್, ಪ್ರಾಣಿ ವಿಜ್ಞಾನ ಅಧ್ಯಯನ ವಿಭಾಗ, ಮೈಸೂರು ವಿಶ್ವವಿದ್ಯಾನಿಲಯ

ಎಲಿಸಿಯಾ ಕ್ಲೋರೊಟಿಕಾ ಎಂಬ ಅಪರೂಪದ ಮೃದ್ವಂಗಿ ಯು ವೌಚೆರಿಯಾ ಲಿಟೋರಿಯಾ ಎಂಬ ಪಾಚಿಯನ್ನು ತಿನ್ನುತ್ತದೆ ಅದು ಪಾಚಿಯ ಜೀವಕೋಶವನ್ನು ಜೀರ್ಣಿಸಿಕೊಳ್ಳುವ ಬದಲು, ಅದರ ಕ್ಲೋರೊಪ್ಲಾಸ್ಟ್‌ಗಳನ್ನು ತನ್ನ ಜೀರ್ಣಾಂಗ ವ್ಯವಸ್ಥೆಯಲ್ಲಿ ಸಂಗ್ರಹಿಸಿ, ನಂತರ ತನ್ನ ಕರುಳಿನ ಕೋಶಗಳಲ್ಲಿ ಹಲವು ತಿಂಗಳುಗಳವರೆಗೆ ಉಳಿಸಿಕೊಂಡು ಆಹಾರವನ್ನು ದ್ಯುತಿಸಂಶ್ಲೇಷಣೆ ಮಾಡುವ ಸಾಮರ್ಥ್ಯ ಹೊಂದಿದೆ