8. ಮೆದುಳಿನ ಯಾವುದೇ ನಿರ್ದಿಷ್ಟ ಭಾಗಕ್ಕೆ ಘಾಸಿಯಾಗಿ ಕಾರ್ಯನಿರ್ವಹಿಸದೆ ಇದ್ದಾಗ ಆ ಭಾಗವನ್ನು Electrical Device ಬಳಸಿ ಪರ್ಯಾಯವಾಗಿ ಕಾರ್ಯ ನಿರ್ವಹಿಸುವಂತೆ ಮಾಡಬಹುದೇ?
ಪ್ರೊ. ಮಾಲಿನಿ ಎಸ್. ಸುತ್ತೂರು, ಪ್ರಾಣಿ ವಿಜ್ಞಾನ ಅಧ್ಯಯನ ವಿಭಾಗ, ಮೈಸೂರು ವಿಶ್ವವಿದ್ಯಾನಿಲಯ

ಮಿದುಳಿನ ಯಾವುದೇ ನಿರ್ದಿಷ್ಟ ಭಾಗಕ್ಕೆ ಹಾನಿಯಾಗಿ ಅದು ಕಾರ್ಯನಿರ್ವಹಿಸದಿದ್ದರೆ ಆ ಭಾಗವನ್ನು ಇಲೆಕ್ಟ್ರಿಕಲ್ ಡಿವೈಸ್ ಬಳಸಿ ಪರ್ಯಾಯವಾಗಿ ಕಾರ್ಯ ನಿರ್ವಹಿಸುವಂತೆ ಮಾಡಬಹುದೇ?

ಇಲ್ಲ, ಸಾಧ್ಯವಿಲ್ಲ. ಮಿದುಳಿನ ರಚನೆ ಬಹಳ ಸಂಕೀರ್ಣವಾಗಿದ್ದು ಅದರಲ್ಲಿ ಕೊಟ್ಯಾಂತರ ನರಕೋಶಗಳಿರುತ್ತವೆ. ಮಿದುಳಿನ ಕಾರ್ಯವೂ ವಿಶಿಷ್ಠವಾಗಿದ್ದು ಒಮ್ಮೆ ಮಿದುಳಿನ ಯಾವುದೇ ಭಾಗ ನಿಷ್ಕ್ರಿಯವಾದರೆ ಅದನ್ನು ಪುನಃ ಕ್ರಿಯಾಶೀಲವಾಗಿಸುವುದು ಅಸಾಧ್ಯ.

ಕಾರಣ ಭ್ರೂಣದ ಬೆಳೆವಣಿಗೆಯಾಗುವಾಗ ಮೂಲ ನರಕೋಶಗಳು ವಿಭಜನೆಯಾಗುತ್ತ (ಡಿವಿಷನ್) ವಿಭೇದನೆಗೊಳ್ಳುತ್ತವೆ (ಡಿಫರನ್ಶಿಯೇಷನ್).

ಒಮ್ಮೆ ವಿಭೇದನೆಯಾದ ನಂತರ ಇವು ವಿಭಜನೆ ಹೊಂದಲಾರವು.

ಮಿದುಳಿನ ಯಾವುದೇ ಭಾಗ ರಕ್ತ ಸಂಚಾರ ಅಥವಾ ಪೌಷ್ಟಿಕಾಂಶಗಳ ಕೊರತೆಯಿಂದ ನಿಷ್ಕ್ರಿಯವಾಗಿದ್ದರೆ, ಅದನ್ನು ವ್ಯಾಯಾಮ, ಯೋಗ, ಫಿಸಿಯೊತೆರಪಿ ಮುಂತಾದವುಗಳಿಂದ ಸ್ವಲ್ಪ ಸುಧಾರಿಸಬಹುದು ಅಷ್ಟೆ.

ಹೃದಯದ ಕೆಲವು ನಿರ್ದಿಷ್ಟ ಭಾಗವು ಕ್ರಿಯಾಹೀನವಾದರೆ ಪೇಸ್ ಮೇಕರ್ ಅಥವಾ ಕೃತಕ ಕವಾಟಗಳ ಅಳವಡಿಕೆಯಿಂದ ಅದನ್ನು ಸರಿಪಡಿಸಬಹುದು.

ಆದರೆ ಮಿದುಳಿನ ಭಾಗವನ್ನು ಸರಿಪಡಿಸಬಲ್ಲ ಇಂತಹ ಯಾವುದೇ ಉಪಕರಣಗಳ ಆವಿಷ್ಕಾರ ಇದುವರೆಗೆ ಆಗಿಲ್ಲ.