9. ಮಾನವನಲ್ಲಿ ಲಿಂಗಭೇದ ಹೇಗೆ ಉಂಟಾಗುತ್ತದೆ?
ಪ್ರೊ. ಮಾಲಿನಿ ಎಸ್. ಸುತ್ತೂರು, ಪ್ರಾಣಿ ವಿಜ್ಞಾನ ಅಧ್ಯಯನ ವಿಭಾಗ, ಮೈಸೂರು ವಿಶ್ವವಿದ್ಯಾನಿಲಯ

ಮಾನವನನ್ನು ಒಳಗೊಂಡಂತೆ ಅನೇಕ ಜೀವಿಗಳಲ್ಲಿ ವರ್ಣತಂತುಗಳು (ಕ್ರೋಮೋಸೋಮುಗಳು) ಲಿಂಗ ನಿರ್ಧಾರದಲ್ಲಿ ಮುಖ್ಯ ಪಾತ್ರವಹಿಸುತ್ತವೆ. ನಮ್ಮ ಜೀವಕೋಶಗಳಲ್ಲಿ ಒಟ್ಟು 46 ವರ್ಣತಂತುಗಳಿರುತ್ತವೆ. ಅವುಗಳಲ್ಲಿ 44 ಕಾಯ ವರ್ಣತಂತುಗಳು, ಎರಡು ಲಿಂಗ ವರ್ಣತಂತುಗಳಿವೆ. ಕಾಯ ವರ್ಣತಂತುಗಳು ಎಲ್ಲಾ ಶಾರೀರಿಕ ಕ್ರಿಯೆಗಳನ್ನು ನಿರ್ಧರಿಸುತ್ತವೆ. ಲಿಂಗ ವರ್ಣತಂತುಗಳಲ್ಲಿ X ಮತ್ತು Y ಎಂಬ ಎರಡು ಬಗೆಗಳಿವೆ. XX ವರ್ಣತಂತುಗಳಿದ್ದರೆ ವ್ಯಕ್ತಿ ಹೆಣ್ಣಾಗಿಯೂ, XY ವರ್ಣತಂತುಗಳಿದ್ದರೆ ಗಂಡಾಗಿ ಬೆಳೆಯುತ್ತಾರೆ.